top of page

Nanna Amma - Prabandha By Agastya

ತಾಯಿಯ ವಾತ್ಸಲ್ಯವು ತಮ್ಮ ಮಕ್ಕಳ ಮೇಲೆ ಸದಾ ಇರುತ್ತದೆ. ಮಕ್ಕಳೂ ಕೂಡ ತಮ್ಮ ತಾಯಿಯರಿಂದ ಪ್ರೇರೇಪಿಸಲ್ಪಟ್ಟವರಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಾರೆ. ಜೀಜಾಬಾಯಿಯು ಶಿವಾಜಿಗೆ ಹೇಗೆ ಪ್ರೇರಣೆಯನ್ನು ಕೊಟ್ಟರೋ, ಹಾಗೆ ತಮ್ಮ ಮಕ್ಕಳಿಗೆ ತಮ್ಮ ತಾಯಿಯೇ ಸ್ಫೂರ್ತಿ. ಅವರ ಪ್ರಾಯವು ಹೆಚ್ಚಿಸುತ್ತಿದ್ದಹಾಗೆಯೇ ನಾವು ಅವರನ್ನು ನೋಡಿಕೊಳ್ಳಬೇಕು. ಮರ್ಯಾದೆ ಕೊಡದೆ ನಮ್ಮ ಪಾಡಿಗೆ ನಾವು, ನಿಮ್ಮ ಪಾಡಿಗೆ ನೀವು ಎನ್ನುವುದಿದ್ದರೆ, ನಮ್ಮ ನಮ್ಮ ಅಮ್ಮಂದಿರು ನಾವು ಅವರ ಹೊಟ್ಟೆಯಲ್ಲಿ ಇದ್ದಾಗ ಅವರು ಯಾಕೆ ನಮ್ಮನ್ನು ನೋಡಿಕೊಳ್ಳಬೇಕಿತ್ತು ? ಆ ಭಾರ, ಆ ದಣಿವು,ಹಾಗೆಯೇ ನಾವು ಒದ್ದಾಡಿದಾಗ ನಮ್ಮ ಕಾಲುಗಳು ನಮ್ಮ ಅಮ್ಮಂದಿರ ಹೊಟ್ಟೆಯನ್ನು ನೋಯಿಸುತ್ತಿತ್ತು ಮತ್ತು ಆ ನೋವಿನಿಂದ ತುಂಬಾ ಕಷ್ಟವನ್ನನುಭವಿಸಿದ್ದಾರೆ. ಹಾಗೆಯೇ ಆ ಒಂಬತ್ತು ತಿಂಗಳು ನಮ್ಮನ್ನು ಸುರಕ್ಷಿತವಾಗಿ, ಒಂದೂ ನೋವನ್ನು ಕೊಡದೆ ನೋಡಿಕೊಂಡಿದ್ದಾರಲ್ಲ, ಅಂಥ ಮಹಾಮಹಿಳೆಯರಿಗೆ ನಾವು ನಮಸ್ಕರಿಸೋಣ.


ನಮ್ಮನ್ನು ಹೊಟ್ಟೆಯಲ್ಲಿ ಹೊತ್ತು ಇದ್ದರಲ್ಲವೇ? ಆದ್ದರಿಂದ ಅವರನ್ನು ನೋಡಿಕೊಳ್ಳಲೇಬೇಕು. ಕೇವಲ ಅದೊಂದೇ ಅಲ್ಲ. ನಮ್ಮನ್ನು ಹುಟ್ಟಿದಾಗಿನಿಂದಾ ನೋಡಿದ್ದಾರೆ, ಎತ್ತಿ ಆಡಿಸಿದ್ದಾರೆ, ಬೆಳೆಸಿದ್ದಾರೆ. ಈ ವಿಷಯದಲ್ಲಿ ಇನ್ನೊಂದು ಮಾತು " ತಾಯಿಗಿಂತ ಬೇರಾವ ದೊಡ್ಡ ಯೋಧನೂ ಇಲ್ಲ " ಎಂಬುವ ಮಾತು ಇಷ್ಟೆಲ್ಲಾ ತಿಳಿದಮೇಲೆ ಸತ್ಯವಲ್ಲವೇ? ಹಾಗಾಗಿ ತಾಯಿಯ ವಾತ್ಸಲ್ಯ ಮತ್ತು ಕರುಣೆ ಅತಿ ಹೆಚ್ಚು. ಈ ಕರುಣೆಯಾಗಲಿ, ಸಹಾಯವಾಗಲಿ ಎಂದಿಗೂ ನಾವು ತೀರಿಸಲಾಗುವುದಿಲ್ಲ. ತೀರಿಸಲಾಗದಂತಹ ಋಣ. ಹಾಗಾಗಿ ಇಂಥ ಮಹನೀಯರಿಗೆ ನಾವು ಮನಃಪೂರ್ಣವಾಗಿ ನಮಸ್ಕರಿಸೋಣ.


- ಶ್ರೀರಾಮ

 

“ಅಮ್ಮ” ಎಂಬ ಶಬ್ದವು ನಮ್ಮ ಬಾಯಿಂದ ಕಷ್ಟದಲ್ಲಿ, ನೋವಾದಾಗ, ಅಥವ ನಾವು ಸುಖದಿಂದ ಕೂಗಿದಾಗ ಏಕೆ ಬರುತ್ತದೆ? ಅದೇಕೆ

“ಅಮ್ಮ” ಎಂದೇ ನಾವು ಕೂಗುತ್ತೇವೆ, ಅದೂ ನಮ್ಮ ಗಮನವಿಲ್ಲದೆ.

ಅದೇ ಒಂದು ಶಬ್ದ ತನ್ನಷ್ಟಟಕ್ಕೆ ತಾನೇ ದಾರಿ ಹುಡುಕಿಕೊಂಡು ಹೊರಗೆ ಬಂದು ಬಿಡುತ್ತದೆ. ಏಕೆ ಚಿಕ್ಕ ಮಗು ಅಮ್ಮನ ಹೊಟ್ಟೆಯಿಂದ ಬಂದು ಅಮ್ಮನಿಂದ ದೂರ ಹೋದಾಗ ಅಳುತ್ತದೆ? ಅದೇಕೆ ಬೇರೆ ಪರಿವಾರದ ಸದಸ್ಯರ ಕೈಯಿಗೆ ಹೋದಾಗ ಅಳುತ್ತದೆ, ಆದರೆ ಅಮ್ಮನ ಕೈಯಿಗೆ ಬಂದ ಕೂಡಲೆ ಅದು ಸುರಕ್ಷತೆಯನ್ನು ಅನುಭವಿಸುತ್ತದೆ?

ಅದೇಕೆ ಕಷ್ಟದಲ್ಲಿರುವಾಗ ಅಮ್ಮನ ಹತ್ತಿರ ಹೋಗಿ ಎಲ್ಲವನ್ನೂ ಅವಳಿಗೆ ಹೇಳಿ ಅಳುತ್ತೇವೆ, ಆದರೆ ಬೇರೆಯವರ ಹತ್ತಿರ ಹೋಗಿ ನಮ್ಮ ಕಷ್ಟ ಹೇಳಿಕೊಳ್ಳಲು ಹಿಂಜರಿಯುತ್ತೇವೆ?

ಈ ಮೇಲಿನ ಪ್ರಶ್ನೆಗಳಿಗೆಲ್ಲ ಒಂದೇ ಉತ್ತರವಿದೆ…

ನಾವು ಅಮ್ಮನ ಗರ್ಭದಲ್ಲಿ ಆ ಒಂಬತ್ತು ತಿಂಗಳಿದ್ದಾಗ ಒಂದು ಮುರಿಯಲಾಗದ ಬಂಧನವು ತಾಯಿ ಮತ್ತು ಮಗುವನ್ನು ಬಂಧಿಸುತ್ತದೆ. ಜೀವನ ಪರ್ಯಂತ ನಾವು ಅಮ್ಮನ ಹತ್ತಿರವೇ ಆ ಸುಖವನ್ನು ಅನುಭವಿಸುತ್ತೇವೆ.

ಆದ್ದರಿಂದ ನಾವು ಅಮ್ಮನನ್ನು ನೀಡಿದ್ದಕ್ಕೆ ಆ ದೇವರಿಗೆ ಕೃತಜ್ಞರಾಗಿರಬೇಕು. “ಅಮ್ಮ” ಕೇವಲ ಒಂದು ಶಬ್ದ ಮಾತ್ರವಲ್ಲ, ಅದು ಇಡೀ ಬ್ರಹ್ಮಾಂಡ…ಬ್ರಹ್ಮಾಂಡವೆಂದರೆ ಅಮ್ಮನೇ ನಮಗೆಲ್ಲುವೂ ಎಂಬುದು ನನ್ನಸಂದೇಶ.


- ಶಿಖಾ

 

ಮಾತೃ ದೇ ವೋ ಭವ |

ಪಿತೃ ದೇ ವೋ ಭವ ||

ಆಚಾರ್ಯ ದೇ ವೋ ಭವ |

ಅತಿಥಿ ದೇ ವೋ ಭವ ||


ತಾಯಿ,ತಂದೆ,ಗುರು ಮತ್ತು ಅತಿಥಿ ಈ ನಾಲ್ವರಲ್ಲಿ ಸರ್ವ ಶ್ರೇಷ್ಠರೆಂದರೆ ತಾಯಿ. ನಾವು ಭಾರತೀಯರು ಪ್ರತ್ಯಕ್ಷ ದೇವತೆಗಳ ಸಾಲಿನಲ್ಲಿ ತಾಯಿಯಂದಿರಿಗೆ ಗೌರವಾನ್ವಿತ ಸ್ಥಾನವನ್ನು ನೀ ಡಿದ್ದೇವೆ. ನರನ ಜನ್ಮದಲ್ಲಿ ತಾಯಿಯ ಪಾತ್ರ ಹಿರಿಯದ್ದು. ರಾತ್ರಿ ಹಗಲನ್ನು ಲೆಕ್ಕಿಸದೆ ತಮ್ಮ ಮಗುವಿನ ಜೀವನೋ ದ್ಧಾರಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ತಾಯಿಯಂದಿರ ಋಣವನ್ನು ತೀರಿಸಲಸಾಧ್ಯ. "ತಾಯಿಯ ಮಹತ್ವ" ಎಂಬ ಸಾಲು ಕೇ ಳಿ ಕೆಲವು ಘಟನೆಗಳು ನೆನಪಾದವು.


ಬೆಂಗಳೂರಿನಲ್ಲಿ ನಡೆಯುವ ಕೆಲವು ವಿಶೇಷ ಕಾರ್ಯಕ್ರಮಗಳಲ್ಲಿ ಕಡಲೇಕಾಯಿ ಪರಿಷೆ ಒಂದು. ಸುಮಾರು ೨ ವರ್ಷಗಳ ಹಿಂದೆ ನಾನು ಮತ್ತು ನನ್ನ ಬಂಧುಗಳು ಕಡಲೇಕಾಯಿ ಪರಿಷೆಗೆ ಹೋದಾಗ, ಓರ್ವ ಮಹಿಳೆಯು ತನ್ನ ಕೂಸೊಂದಿಗೆ ಒದ್ದಾಡುತ್ತಿದ್ದಳು. ನನ್ನ ಕುಟುಂಬದ ಸದಸ್ಯರು

ವ್ಯಥೆಗೊಂಡು ೩೦ ರೂಗಳನ್ನು ಅವಳಿಗೆ ನೀ ಡಿದರು. ಆಗ ಆ ಬಡ ತಾಯಿ ತನ್ನ ಹಸಿವನ್ನು ಲೆಕ್ಕಿ ಸದೆ ತನ್ನ ಮಗುವಿನ ಹಸಿವನ್ನು ನೀ ಗಿಸುವ ಸಲುವಾಗಿ ಆ ೩೦ ರೂಗಳನ್ನು ತನ್ನ ಮಗುವಿಗೆ ಖರ್ಚು ಮಾಡಿಬಿಟ್ಟಳು. ಅಂಥಹ ಮನಸ್ಸು ತಾಯಿಯದು. ಇದು ಕಣ್ಣಮುಂದೆ ನಡೆದ ಘಟನೆಯಾದರೆ ಹೀ ಗೊಂದು ಓದಿದ ಘಟನೆ ನೆನಪಿಗೆ ಬರುತ್ತದೆ.


ಥಾಮಸ್ ಆಲ್ವ ಎಡಿಸನ್ರವರು ವಿಶ್ವವಿಖ್ಯಾ ತ ವಿಜ್ಞಾನಿ. ತಮ್ಮ ಸುಲಭವಾದ ಜೀವನವನ್ನು ನಡೆಸುವ ಮುನ್ನ ಅವರು ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ. ಅವರು ಚಿಕ್ಕವರಿದ್ದಾಗ ಅವರ ಪೋಷಕರಿಗೆ ಶಾಲೆಯಿಂದ ಪತ್ರವೊಂದು ಬರುತ್ತದೆ. ಅವರ ತಾಯಿ ಆ ಪತ್ರವನ್ನು ತೆಗೆದು ಓದುತ್ತಾರೆ, ಓದುವಾಗ ತಾಯಿಯ ಕಣ್ಣು ತುಂಬಿ ಬಂದದ್ದನ್ನು ನೋಡಿದ ಬಾಲಕ ಎಡಿಸನ್ರವರು ಪತ್ರದಲ್ಲೇನಿದೆ ಎಂದು ಕೇಳಿದಾಗ, "ನಿಮ್ಮ ಮಗು ತುಂಬಾ ಬುದ್ಧಿವಂತ, ಅವನಿಗೆ ಪಾಠ ಕಲಿಸಲು, ನಮಗೆ ಅರ್ಹತೆಯಿಲ್ಲ, ಅವನಿಗೆ ಶಿಕ್ಷಣವನ್ನು ನೀವೇ ಕೊಡಿ" ಎಂದು ಓದುತ್ತಾರೆ. ಮುಂದೆ ಅವರ ತಾಯಿಯವರು ನಿಧನರಾದ ಸಮಯದಲ್ಲಿ ಥಾಮಸ್ ಅವರು ಪ್ರಖ್ಯಾತ ವಿಜ್ಞಾ ನಿಯಾಗಿದ್ದರು. ತಾವು ಬಾಲ್ಯದಲ್ಲಿದ್ದಾಗ, ಒಮ್ಮೆಅವರ ತಾಯಿ ಓದಿದ ಪತ್ರ ಸಿಕ್ಕಿತು. ಆ ಪತ್ರವನ್ನು ನೋಡಿ ಎಡಿಸನ್ರವರು ಬಿಕ್ಕಿ-ಬಿಕ್ಕಿ ಅತ್ತರು. ಆ ಪತ್ರದಲ್ಲಿ "ನಿಮ್ಮ ಮಗು ಬುದ್ಧಿಮಾಂಧ್ಯ. ಅವನಿಗೆ ಶಾಲೆಯಲ್ಲಿ ಓದಲು ಅವಕಾಶವಿಲ್ಲ" ಎಂದಿತ್ತು. ಹೀಗೆ ಥಾಮಸ್ ಆಲ್ವ ಎಡಿಸನ್ರವರ ತಾಯಿ ತಮ್ಮ ಮಗುವಿನ ಮನವನ್ನು ನೋಯಿಸಲು ಇಚ್ಛಿಸದೆ ಆ ಪತ್ರದಲ್ಲಿದ್ದುದ್ದನ್ನೇ ಬದಲಾಯಿಸಿದರು. ಅಂದು ಎಡಿಸನ್ರವರ ತಾಯಿ ಪತ್ರದಲ್ಲಿದ್ದಹಾಗೆ ಓದಿದ್ದರೆ, ನಾವೆಲ್ಲಎಡಿಸನ್ಎಂಬ ವಿಜ್ಞಾನಿಯ ಬಗ್ಗೆ ತಿಳಿದಿರುತ್ತಿರಲಿಲ್ಲ. ಆ ತಾಯಿ ತನ್ನ ಮಗುವಿನ ನೂನ್ಯತೆಯನ್ನು ಸಾಮರ್ಥ್ಯಕ್ಕೆ ಬದಲಾಯಿಸಿದಳು. ತಾಯಿಯ ಮಹತ್ವ ಅಂಥದ್ದು.


ತಾಯಿಯ ಮಹತ್ವವನ್ನು ಕೇವಲ ಪದಗಳಿಂದ ಬಣ್ಣಿಸಲಸಾಧ್ಯ. "ಅಮ್ಮ" ಎಂಬ ಎರಡೇ ಅಕ್ಷರದ ಪದವಿದ್ದರೂ, ಅದರ ಅರ್ಥ ಅಪಾರವಾದದ್ದು. ನಾವು ಎಂದಿಗೂ ತಾಯಿಗೆ ಚಿರಋಣಿಯಾಗಿರಬೇಕು.


- ಮುಕುಂದ



564 views0 comments

Recent Posts

See All

Art

'Bravo Chanda' - By Sharvari

Chanda was awakened as usual by the calls of roosters. She got up from the straw mat she was sleeping on. As she rubbed her eyes, she saw...

Comments


bottom of page