top of page

Song of Anandamath: Verses Resonating with Patriotism and Passion

Updated: Nov 27, 2023



Anandamath is a Bengali historical novel, written by Bankim Chandra Chattopadhyay and published in 1882. The novel is set in the events of the Sannyasi Rebellion, which took place in the late 18th century in Bengal.

Here is a short poem, written by Samvida student Shrirama about the book Ananadamath.

In his poem, Shrirama has beautifully captured the emotions and themes of the novel, creating a poetic panorama that reflects the soul of the literary work.





ಹದಿನೇಳನೆಯ ಶತಕದುತ್ತರದ ಕಾಲದೊಳು

ಪದಚಿಹ್ನೆಯೆಂಬೊಂದು ಹಳ್ಳಿಯಿತ್ತು l

ಕ್ಷಾಮವತಿ ಗತಿಯಿಲ್ಲ ತಿನ್ನಲಿಕೆಯೇನಿಲ್ಲ

ಖಾಲಿಯಾಗಿದ್ದವಂಗಡಿಗಳೆಲ್ಲ ll೧ll

ದೇಶರಕ್ಷಣೆಯೊಂದೆ ಸಂತಾನರಾಗುರಿಯು

ಗುರುನಾಯಕನಿರೆ ಸತ್ಯಾನಂದನಲ್ಲಿ l

ಆಂಗ್ಲರೊಳು ಹೋರಾಡಿ ದೋಚಲಿಕೆ ತರಬೇತಿ

ಪಡೆದಲ್ಲ ನಿಷ್ಣಾತರಿವನಿಂದಲೇ ll೬ll

ಆ ಹಳ್ಳಿಯ ಮಹೇಂದ್ರನೆಂಬೊಬ್ಬ ಸಿರಿವಂತ

ಮಡದಿಮಗುವೊಂದಾಗಿ ಬಾಳುತ್ತಿದ್ದ l

ಅಕ್ಕರೆಯೊಳಿರೆ ಕಂದ ಬರರಕ್ಕಸನು ಬಂದ

ಭೀಕರತೆ ದೂಡೆ ಮನೆಯಿಂದಲವರಾ ll೨ll

ಕಲ್ಯಾಣಿಯಾಮಗುವು ವಿಷವಕುಡಿದುದತಿಳಿದು

ಪೀತವಿಶಾಲಾದಳೈ ತಾಯಿಕೂಡ l

ಅದೃಷ್ಟದಿಯೆ ಜೀವವುಳಿಯೆ ಜನನಿಯಸುತೆಯ

ನೆಲಸೆ ನೆಮ್ಮದಿಯಿಂದ ಸಂತರೊಡನೆ ll೭ll

ಬಲುದೂರ ನಡೆದಿರಲು ಮನೆಯೊದಗೆ ಸತಿಪುತ್ರಿ

ಯರಬಿಟ್ಟು ಹೊರಟತಾಂ ಕ್ಷೀರಕಾಗಿ l

ಗಂಡನಿಲ್ಲದ ವೇಳೆ ಗಂಡಾಂತರವು ಬರಲು

ತಾಯ್ಮಗಳು ಕಳ್ಳರಾ ಪಾಲಾದರು ll೩ll

ಸಂತರಿಗೆ ಶಸ್ತ್ರ ಸಂಗ್ರಹಣ ವೇಳೆಗೆ ಸಿಕ್ಕ

ಸಮರದೊಳು ಕೈಜೋಡಿಸೆ ಮಹೇಂದ್ರನು l

ಮಡದಿ ಜೀವಾನಂದ ಪುರುಷವೇಷದಿ ತಾನು

ಸಮರ ಸಿಂಹಿಣಿಯಾಗೆ ಪುರುಷಸಮಕೆ ll೮ll

ಕಾಡಿನಾಳಕೆ ವೊಯ್ದು ತಿನ್ನುವಿಬ್ಬರನೀಗ

ಲೆನಲೊಬ್ಬ ಪುಟ್ಟಿತೈ ವೊಳಜಗಳವು l

ಓಡಿದಳು ಕಲ್ಯಾಣಿ ಜಪಿಸುತ್ತ ಹರಿನಾಮ

ಮಗುವಿನೊಂದಿಗೆ ದೊರೆಯ ಸಂತರಾಗ ll೪ll

ಅಂತ್ಯದಲಿ ಗೆದ್ದರಿವರೆಂದು ಕುಣಿದಾಡಿದರು

ವಿಜಯಯಾತ್ರೆಯ ಮಾಡಿ ಸಂತರೆಲ್ಲಾ l

ಮಾತೃರಕ್ಷಣೆಗೈದು ಪುತ್ರತೆಯೆ ಸಾರ್ಥಕವು

ಅನಂದಮಠದ ಕಥೆಯಿಂತು ಮುಗಿಯೆ ll೯ll

ರಕ್ಷಿತಳು ಕಲ್ಯಾಣಿ ಸಾಧುಗಳ ದೆಸೆಯಿಂದ

ಸೇರಲಾನಂದಮಠ ದುಗುಡ ಕಳೆಯೇ l

ಎಲ್ಲವಿಷಯವನವಳ ಬಗೆಗೆ ಕೇಳಿದ ರಿವರು

ನಿಶ್ಚಯಿಸೆ ಹುಡುಕಲೀಕೆಯ ಪತಿಯನು ll೫ll

ಸಮರಮುಗಿಯಿತುಯೆಂದು ತೆರಳೆ ಸತ್ಯಾನಂದ

ಹಿಮಪರ್ವತದಿ ತಪವ ಗೈಯ್ಯಲೆಂದು l

ಇತ್ತಲೊಂದಾಗಿ ಸುಖಸಂತೋಷದಿಂ ಕೂಡಿ

ಕಲ್ಯಾಣಿ ಪತಿ ಪುತ್ರಿ ನೆಲಗೊಂಡರು ll೧೦ll


127 views0 comments

Comentarios


bottom of page