ಗೊಂಬೆಯಾಟ ಕಾರ್ಯಾಗಾರ
A puppetry workshop (ಗೊಂಬೆಯಾಟ ಕಾರ್ಯಾಗಾರ) was organised in the month of December 2022. It was an opportunity for participants to reflect on and showcase the skills and techniques they learnt during the 5 day workshop. The workshop was designed to follow the order of six phases. ಗೊಂಬೆಯಾಟದ ಆರು ಪ್ರಕಾರಗಳು - ಗೊಂಬೆಯೊಂದಿಗೆ ಹೊಂದಾಣಿಕೆ - ಹೊಸ ಪಾತ್ರಗಳ ಸೃಷ್ಟಿ - ನವರಸ ಪರಿಚಯ - ದೃಶ್ಯಗಳ ರಚನೆ - ಕಥೆ ಸಂಯೋಜನೆ - ಗೊಂಬೆಯಾಟ ಪ್ರದರ್ಶನ. The workshop culminated with kids showcasing the learnings from past 4 days.
ಕಾರ್ಯಾಗಾರದ ಅನುಭವ:
*ಗೊಂಬೆ, ಗೊಂಬೆ, ಗೊಂಬೇ...*
*ಗೊಂಬೇ, ಗೊಂಬೆ, ಗೊಂಬೆ...*
ಐದು ದಿನಗಳ(17 to 21 December 2022) ಗೊಂಬೆಯಾಟ ಕಾರ್ಯಾಗಾರ. *ಸಂವಿದಾ* - ಪಾಲಕರು ಭಾರತೀಯ ಮೂಲ ಕಲಿಕಾ ತತ್ವಗಳ ಆಧಾರದ ಮೇಲೆ ಸೃಷ್ಟಿಸಿದ ಸುರಕ್ಷಿತ ಕಲಿಕಾ ವಲಯ.
ಶೈಕ್ಷಣಿಕ ವ್ಯವಸ್ಥೆ, ಶಾಲೆ, ಶಿಸ್ತಿನ ಹೆಸರಿನಲ್ಲಿ ಹೇರುವ ಬಂಧನಗಳನ್ನು ಕಳಚಿಕೊಂಡು, ತಮ್ಮ ಮಕ್ಕಳ ಭವಿಷ್ಯ ಕಟ್ಟಲು ಪೋಷಕರೇ ಕಟ್ಟಿದ ಪರ್ಯಾಯ ಕಲಿಕಾ ವಲಯ ಸಂವಿದಾ. ಇಲ್ಲಿ ಪಾಲಕರೇ ಸಂಪನ್ಮೂಲ ವ್ಯಕ್ತಿ(ಶಿಕ್ಷಕರು)ಗಳು. ಅಲ್ಲಿ ಯಾರೂ ಸರ್, ಮೇಡಂಗಳಿಲ್ಲ. ತಮ್ಮದೇ ಆಚರಣೆ, ಸಂಸ್ಕಾರವೇ ಮೂಲಾಧಾರ.
*ಸಂವಿದಾ* ದಂತಹ ವಿಶಿಷ್ಟ ವ್ಯವಸ್ಥೆಯಲ್ಲಿ ಐದು ದಿನಗಳ *ಗೊಂಬೆಯಾಟ ಕಾರ್ಯಾಗಾರ* ನಡೆಸುವ ಅವಕಾಶ ನನಗೆ ಒದಗಿ ಬಂತು. ಮಕ್ಕಳು ಮತ್ತು ಪಾಲಕರು ಸೇರಿ ಒಟ್ಟು ಐವತ್ತರಿಂದ ಅರವತ್ತು ಸಂಖ್ಯೆಯ ಗುಂಪು ಗೊಂಬೆಯಾಟದಲ್ಲಿ ಮಾಸ್ಟರಿ ಮುಗಿಸಿದ ಅನುಭೂತಿ ಪಡೆಯುವಷ್ಟರಮಟ್ಟಿಗೆ ಕಾರ್ಯಾಗಾರ ಯಶಸ್ವಿಯಾಯಿತು.
*ಕಾರ್ಯಾಗಾರ:*
ಗೊಂಬೆಯಾಟ ಪ್ರದರ್ಶನ - ಗೊಂಬೆಯಾಟ ಇತಿಹಾಸ - ಗೊಂಬೆಯಾಟದ ಆರು ಪ್ರಕಾರಗಳು - ಗೊಂಬೆಯೊಂದಿಗೆ ಹೊಂದಾಣಿಕೆ - ಹೊಸ ಪಾತ್ರಗಳ ಸೃಷ್ಟಿ - ನವರಸ ಪರಿಚಯ - ದೃಶ್ಯಗಳ ರಚನೆ - ಕಥೆ ಸಂಯೋಜನೆ - ಮೂರು ಪ್ರಕಾರದ ಗೊಂಬೆ ತಯಾರಿ - ರಂಗಕೃತಿ ರಚನೆ - ಪಾತ್ರಗಳೊಂದಿಗೆ ಸಂವಹನ - ತಾಲೀಮು - ಸಂಗೀತ - ತಾಲೀಮು - ಪ್ರದರ್ಶನ(1.ಕೈಗವಸು ಗೊಂಬೆ, 2.ಸರಳು ಗೊಂಬೆ, 3.ಸೂತ್ರದ ಗೊಂಬೆ).
- ಹೀಗೆ ಒಂದು ಸುದೀರ್ಘ ಪ್ರಕ್ರಿಯೆಯಲ್ಲಿ ಯಾವುದೂ ಸಿದ್ಧ ಸಂಪನ್ಮೂಲ ಬಳಕೆಯಿಲ್ಲ. ಎಲ್ಲವೂ ಹೊಸದು, ಸೃಜಿಸಿದ್ದು.
ಐದು ದಿನಗಳಲ್ಲಿ ಹಾಡಿದ್ದು, ಆಡಿದ್ದು, ಕುಣಿದದ್ದು, ಕುಪ್ಪಳಿಸಿದ್ದು, ಗದರಿದ್ದು, ಮೌನವಾಗಿದ್ದು, ನಕ್ಕಿದ್ದು, ಅರಳಿದ್ದು, ಎಲ್ಲವೂ ನಡೆದಿದೆ. ಗೊಂಬೆಯಾಟದ ಪ್ರಾಥಮಿಕ ಪರಿಕಲ್ಪನೆಯೂ ಇರದ ತಂಡ ಮಾಸ್ಟರಿ ಮಟ್ಟಿಗೆ ಸಿದ್ಧಗೊಂಡದ್ದು ಒಂದು ಅದ್ಭುತ ಪಯಣ. ಅದರಲ್ಲಿ ಒಂದು ಸಂಸ್ಕೃತ ಗೊಂಬೆಯಾಟ. ಈ ಯಶಸ್ಸಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಸಿದ್ಧಪ್ಪ ಬಿರಾದರ್, ನಾನು(ಅರುಣ ಬಿ.ಟಿ, ಗೊಪ್ಪೇನಹಳ್ಳಿ), ಪೋಷಕರು (ಮಹೋದಯರು, ಭಗಿನಿಯರು) ಮತ್ತು ಮುಖ್ಯವಾಗಿ ಮಕ್ಕಳು ಕಾರಣ.
- Arun, Workshop Mentor
Comentarios